An Auspicious Beginning

YPS Meet | Nov 5, 2016 | State Youth Centre

What better way to start YPS Meets in the new premises of YPS than with celebrations. YPS Members and their families assembled at the YPS hall on the third floor of the State Youth Centre on November 5, 2016, Saturday to celebrate Karnataka Rajyotsava.

Kannada Rajyotsava

Kannada Rajyotsava (Kannada: ಕನ್ನಡ ರಾಜ್ಯೋತ್ಸವ; Karnataka Formation Day; literally “Birth of the Karnataka state”) is celebrated on 1 November of every year. On 1 November 1956, Mysore state, comprising most of the area of the erstwhile princely state of Mysore, was merged with the Kannada-speaking areas of the Bombay and Madras presidencies, as also of the principality of Hyderabad, to create a unified Kannada-speaking sub-national entity. North Karnataka, Malnad (Canara) and old Mysore were thus the three regions of the newly formed Mysore state. The newly unified state initially retained the name “Mysore” and was later changed to “Karnataka” on 1 November 1973.

Celebrations at YPS

inaugural_speechA number of YPS Members and their families assembled at the State Youth Centre to celebrate Kannada Rajyotsava. Shri. Anupam Agarwal, IPS, Director, Youth Empowerment and Sports Department, Govt. of Karnataka presided over the function. Before the start of celebrations sweets and savouries were distributed to members to create the festive mood. Shri. H Satish, President, YPS, spoke about the significance of Kannada Rajyotsava and the need for celebrating the same. He spoke about how the event is celebrated.

He then invited Shri. Anupam Agarwal to invoke the blessings of Goddess of Karnataka by lighting the lamp.

lamp_lighting

This was followed by lighting of small lamps by the women and children in the room to add brilliance to the Goddess of Karnataka. Shri. Satish then requested Shri. Anupam Agarwal to say a few words to the YPS Members.

Shri Anupam Agarwal, IPS addressing YPS Members
Shri Anupam Agarwal, IPS addressing YPS Members

To everyone’s surprise, the Director spoke in Kannada. He wished YPS all success and reiterated the need for protection of interests of Karnataka amidst everything happening. He wished that YPS will generate enough awareness among youth regarding photography. Shri. K S Rajaram, Vice President, YPS, presented Shri. Anupan Agarwal with a memento.

Shri Rajaram presenting a memento to Shri. Anupam Agarwal
Shri Rajaram presenting a memento to Shri. Anupam Agarwal

This was followed by light entertainment by Shri. Satwik S Rao, Shri. Manohar and Shri. Abhinav, who entertained the members with lively Kannada songs accompanied by Keyboard. Shri. Satwaik S Rao is the son of Shri. G Sudhakar, Photographer and erstwhile member of YPS.

Abhinav, Satwik S Rao and Manohar entertaining the members
Abhinav, Satwik S Rao and Manohar entertaining the members

Shri. Satish then spoke of women empowerment and how Karnataka leads in bringing out the best in women. He then spoke about how, one of the YPS Members has been making a difference to YPS and the Kannada language by coining attractive Kannada titles for all the pictures that were on exhibition at the YPS World Photography Day Celebration Exhibition held at Chitrakala Parishath on August 20th & 21st.  Yes, he was speaking about Ms. Bhagya D, whom he called on stage to recognize her with a bouquet and memento. The memento was handed over to Ms. Bhagya by Smt. Manjula Satish.

Recognition for Ms. Bhagya D
Recognition for Ms. Bhagya D

The event ended with singing of Karnataka Anthem Jaya Bharata Jananiya Tanujate (ಜಯ ಭಾರತ ಜನನಿಯ ತನುಜಾತೆ) written by poet Kuvempu.

anthem

Here is a summary of the event compiled by Shri. Satish and Shri. Madhusudana Rao in Kannada for Kannada Abhimanis.

ನವೆಂಬರ್ ೫ರಂದು ಶನಿವಾರ ೬೧ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ YPS ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು ೩೦ ಸದಸ್ಯರು ಭಾಗಿಯಾಗಿದ್ದರು. ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾದ ಶ್ರೀಅನುಪಮ್ ಅಗರ್‌ವಾಲ್‌ IPS, ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನ, ನೆರೆದಿದ್ದ ಸಭಿಕರಿಗೆ ಸಂಭ್ರಮಾಚರಣೆಯ ದ್ಯೋತಕವಾಗಿ ಸಿಹಿ ಮತ್ತು ಖಾರದ ತಿಂಡಿಗಳನ್ನು ಹಂಚಲಾಯಿತು.

 

YPS ಅಧ್ಯಕ್ಷರಾದ ಶ್ರೀ ಹೆಚ್ ಸತೀಶ್‍ರವರು ಸ್ವಾಗತ ಭಾಷಣ ಮಾಡಿ, ರಾಜ್ಯದ ಹತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳನ್ನು ನೆನೆದು, ಅವರು ಕನ್ನಡ ನಾಡಿಗೆ ಸಲ್ಲಿಸಿದ ಅನುಪಮ ಸೇವಾಕಾರ್ಯಗಳನ್ನು ಸ್ಮರಿಸುತ್ತಾ, ಕನ್ನಡ ನಾಡಿನಲ್ಲಿ ಹುಟ್ಟುವುದೇ ಒಬ್ಬಮನುಷ್ಯನ ದೊಡ್ಡ ಭಾಗ್ಯವೆಂದರು. ಕಾರ್ಯಕ್ರಮದ ವಿವರಣೆಯನ್ನು ನೀಡಿದ ಸತೀಶ್, ಕನ್ನಡಾಂಬೆಯ ಆಶೀರ್ವಾದವನ್ನು ಪಡೆಯಲೋಸುಗ ದೀಪ ಬೆಳಗಿ ಸಮಾರಂಭವನ್ನು ಉದ್ಘಾಟಿಸುವಂತೆ ಶ್ರೀ ಅಗರ್‌ವಾಲರನ್ನು ವಿನಂತಿಸಿದರು. ಶ್ರೀ ಅನುಪಮ್ ಅಗರ್‌ವಾಲ್‌ರವರು ಕನ್ನಡಾಂಬೆಯ ಭಾವಚಿತ್ರದ ಮುಂದೆ ಇಟ್ಟಿದ್ದ ದೀಪವನ್ನು ಹಚ್ಚಿದೊಡನೆಯೇ ಸಭಿಕರಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸಭಾಂಗಣದಲ್ಲಿಟ್ಟಿದ್ದ ಸಣ್ಣ ಸಣ್ಣ ದೀಪಗಳನ್ನು ಬೆಳಗುವುದರ ಮೂಲಕ ಸಭೆಯ ಪ್ರಭೆಯನ್ನು ಹೆಚ್ಚಿಸಿದರು.

ನಂತರ ಶ್ರೀ ಸತೀಶ್‌ರವರು ಸಭೆಯನ್ನುದ್ದೇಶಿಸಿ ಕೆಲವು ಮಾತುಗಳನ್ನಾಡಬೇಕೆಂದು ಶ್ರೀ ಅನುಪಮ್ ಅಗರ್‌ವಾಲ್‌ರನ್ನು ವಿನಂತಿಸಿದರು. ರಾಜಸ್ಥಾನ ಮೂಲದವರಾದ ಶ್ರೀ ಅನುಪಮ್‌ರವರು ಸಭಿಕರು ಆಶ್ಚರ್ಯಚಕಿತರಾಗುವಂತೆ ಅಪ್ಪಟ ಕನ್ನಡದಲ್ಲೇ ಮಾತನಾಡಿದರು. ಕನ್ನಡಾಂಬೆಯನ್ನು ಸ್ಮರಿಸುತ್ತಾ, ಕನ್ನಡದ ನೆಲ, ಜಲದ ಹಿತಾಸಕ್ತಿಯನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು. ಯುವಜನರಲ್ಲಿ ಛಾಯಾಚಿತ್ರಗ್ರಹಣದ ಬಗೆಗೆ ಸಾಕಷ್ಟು ಅರಿವನ್ನು YPS ಮೂಡಿಸಲಿ ಎಂದು ಹಾರೈಸಿದ ಅನುಪಮ್ ಅಗರ್‌ವಾಲ್‌, YPSಗೆ ಎಲ್ಲಾ ಕೆಲಸಗಳಲ್ಲೂ ಜಯವನ್ನು ಕೋರಿದರು. YPSನ ಯಾವುದೇ  ಕಾರ್ಯಕ್ರಮಗಳಿಗೆ ಏನೇ ಸೌಲಭ್ಯಗಳು ಬೇಕಾದಲ್ಲಿ ಒದಗಿಸಿಕೊಡುವ ಭರವಸೆಯನ್ನು ನೀಡಿದ ಶ್ರೀ ಅಗರ್‌ವಾಲ್‌ ಈಗ ಇರುವ ದೊಡ್ಡ ಸಭಾಂಗಣದಲ್ಲಿ ಎಲ್ಲವನ್ನೂಶುಚಿಗೊಳಿಸಿ ಎರಡು ಸಣ್ಣ ಕೋಣೆಗಳನ್ನು ಕಟ್ಟಿಸಿಕೊಡುವ ಪ್ರಸ್ತಾವನೆಯನ್ನಿತ್ತರು. ತಮ್ಮ ಆಪ್ತವಾದ ಕನ್ನಡ ಭಾಷಣದಿಂದ ಸಭಿಕರ ಮನಗೆದ್ದ ಶ್ರೀ ಅನುಪಮ್ ಅಗರ್‌ವಾಲ್‌ರಿಗೆ YPSನ ಉಪಾಧ್ಯಕ್ಷರಾದ ಶ್ರೀ ಕೆ ಎಸ್ ರಾಜಾರಾಮ್‍ರವರು ಸ್ಮರಣಿಕೆಯೊಂದನ್ನು ನೀಡಿ ಗೌರವಿಸಿದರು.

ನಂತರದ ಕಾರ್ಯಕ್ರಮ ’ಕನ್ನಡ ರಸ ಸಂಜೆ’. ನಮ್ಮ ಹಿರಿಯ ಸದಸ್ಯರಾದ ಶ್ರೀ ಜಿ ಸುಧಾಕರ್‌ರವರ ಪುತ್ರ ಶ್ರೀ ಸಾತ್ವಿಕ್ ಎಸ್ ರಾವ್‌ರವರು ತಮ್ಮ ಸಂಗಡಿಗರಾದ ಶ್ರೀ ಮನೋಹರ್ ಮತ್ತು ಶ್ರೀ ಅಭಿನವ್‍ರವರೊಡನೆ ಕಟ್ಟಿದ ಪುಟ್ಟ ತಂಡದಿಂದ ನಡೆದ ಈ ರಸ ಸಂಜೆಯಲ್ಲಿ ಪ್ರಸಿದ್ಧ ಕವಿಗಳ ಭಾವಗೀತೆಗಳು, ಜಾನಪದ ಗೀತೆಗಳು, ಮಧುರ ಚಲನಚಿತ್ರ ಗೀತೆಗಳು ಮತ್ತು ಭಕ್ತಿ ಗೀತೆಗಳ ಸುಶ್ರಾವ್ಯವಾದ ಗಾಯನ ಸಭಿಕರನ್ನು ಮೋಡಿ ಮಾಡಿತು. ಸಾತ್ವಿಕ್ ತಮ್ಮ ಗಾಯನದೊಡನೆ ಕೀಬೋರ್ಡ್ ವಾದನದಿಂದಲೂ ಸಭಿಕರ ಮನಸೂರೆಗೊಂಡರು.

ನಂತರ ಶ್ರೀ ಸತೀಶ್‌ರವರು ಮಹಿಳಾ ಸಮಾನತೆ ಮತ್ತು ಸಬಲೀಕರಣದ ಬಗೆಗೆ ಮಾತನಾಡಿ, ದೇಶದ, ರಾಜ್ಯದ ಹಲವಾರು ಮಹಿಳಾ ಸಾಧಕಿಯರನ್ನು ಸ್ಮರಿಸಿ, YPSನ ಓರ್ವ ಮಹಿಳಾ ಸದಸ್ಯೆ ನಮ್ಮ ವಾಟ್ಸಾಪ್ ಗುಂಪಿನಲ್ಲಿ ಸದಸ್ಯರು ಹಾಕುವ ಪ್ರತಿಯೊಂದು ಚಿತ್ರಕ್ಕೂ ಸ್ಪಂದಿಸಿ ಅಪ್ಪಟ ಕನ್ನಡದಲ್ಲಿ ಪುಟ್ಟದೊಂದು ಕವನವನ್ನು ರಚಿಸಿ ಕಳಿಸುವುದರ ಮೂಲಕ ಚಿತ್ರಗಳಿಗೆ ಕಳೆಗಟ್ಟುವುದನ್ನೂ ಅಲ್ಲದೆ ಆಗಸ್ಟ್ ೨೦-೨೧ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ YPS ಏರ್ಪಡಿಸಿದ್ದ ವಿಶ್ವ ಛಾಯಾಚಿತ್ರ ದಿನದ ಆಚರಣೆಯಲ್ಲಿ ಪ್ರದರ್ಶಿತವಾಗಿದ್ದ ಪ್ರತಿಯೊಂದು ಚಿತ್ರಕ್ಕೂ ಸೂಕ್ತವಾದ ಅಡಿಬರೆಹವನ್ನು ರಚಿಸಿದ್ದನ್ನು ಸ್ಮರಿಸಿ, ಮೊದಲ ಬಾರಿಗೆ YPSನಲ್ಲಿ ಓರ್ವ ಮಹಿಳೆಗೆ ಪುರಸ್ಕಾರವನ್ನು ನೀಡಿ ಗೌರವಿಸಲು ನಿರ್ಧರಿಸಿರುವುದಾಗಿ ಹೇಳಿ ಸದಸ್ಯೆಯಾದ ಶ್ರೀಮತಿ ಭಾಗ್ಯಾ ಡಿ ಇವರನ್ನು ವೇದಿಕೆಗೆ ಆಹ್ವಾನಿಸಿದರು. ಭಾಗ್ಯಾರವರ ಕನ್ನಡಾಭಿಮಾನಕ್ಕೆ ಹಾಗೂ ಭಾಷಾ ಜ್ಞಾನಕ್ಕೆ ಬೆರಗಾಗದವರೇ ಇಲ್ಲ, ಇಂತಹ ವ್ಯಕ್ತಿ ನಮ್ಮೊಂದಿಗಿರುವುದೇ ನಮ್ಮ ಭಾಗ್ಯವೆಂದು, ಕನ್ನಡ ರಾಜ್ಯೋತ್ಸವದ ಅಂಗವಾಗಿ YPSನ ’ಕವಯಿತ್ರಿ’ ಶ್ರೀಮತಿಭಾಗ್ಯಾರವರನ್ನು ಪುರಸ್ಕರಿಸಲು ಶ್ರೀಮತಿ ಮಂಜುಳಾರನ್ನು ಕೋರಿದರು. ಶ್ರೀಮತಿ ಮಂಜುಳಾ ಸತೀಶ್‌ರವರು ಶ್ರೀಮತಿ ಭಾಗ್ಯಾರಿಗೆ ಪುಷ್ಪ ಗುಚ್ಛ ಹಾಗೂ ಸ್ಮರಣಿಕೆಯನ್ನಿತ್ತು ಗೌರವದಿಂದ ಪುರಸ್ಕರಿಸಿದರು.

ನಮ್ಮ ನಾಡಗೀತೆಯಾದ ’ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ…’ ಹಾಡನ್ನು ಸಾತ್ವಿಕ್ ಮತ್ತು ತಂಡದೊಂದಿಗೆ ಸಭಿಕರು ಹಾಡುವುದರ ಮೂಲಕ ಸಮಾರಂಭ ಸಮಾಪ್ತಿಯಾಯಿತು.

 ಕಾರ್ಯಕ್ರಮಕ್ಕೆ ಬಂದಂತಹ ಸದಸ್ಯರಿಗೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಿಗೆ, ಸಾತ್ವಿಕ್ ಮತ್ತು ತಂಡದವರಿಗೆ ಹಾಗೂ ಶ್ರೀಮತಿ ಭಾಗ್ಯಾರವರಿಗೆ, ಎಲ್ಲರಿಗೂ ಧನ್ಯವಾದಗಳು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ